ಸ್ವಾಗತ

ವಿಶ್ವೇಶ್ವರಪುರ ಕಲೆ ಮತ್ತು ವಾಣಿಜ್ಯ ಸಂಜೆ ಕಾಲೇಜು

ನಮ್ಮ ಕಾಲೇಜು ಅರ್ಧಶತಮಾನಕ್ಕೂ ಹೆಚ್ಚು ಕಾಲದಿಂದ ಐತಿಹಾಸಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಬೆಂಗಳೂರಿನ ಸುತ್ತಮುತ್ತಲ ಗ್ರಾಮೀಣಭಾಗದ, ಬಡತನ ಹಿನ್ನೆಲೆಯ ಶಿಕ್ಷಣರಹಿತ ಕುಟುಂಬಗಳ ಮಕ್ಕಳು ಹೊರಳುದಾರಿಯ ಸಂಪನ್ನ ಭಾರತಕ್ಕೆ ಸೇರ್ಪಡೆಯಾಗುವ ಹಾಗೂ ಅಂತಹ ಭಾರತದ ವಿಸ್ತಾರಕ್ಕೆ ಕಾರಣವಾಗುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಾಧನೆಯ ಧನ್ಯತೆಯು ನಮಗೆ ಇನ್ನಷ್ಟು ಜವಾಬ್ದಾರಿಯನ್ನು ನೀಡುತ್ತದೆ. ಶೈಕ್ಷಣಿಕ ಶ್ರೀಮಂತಿಕೆಯ ಜೊತೆಗೆ ಬಾಳ್ವೆಯ ಶ್ರೀಮಂತಿಕೆ ಮುಖ್ಯವೆಂಬುದನ್ನು ನಮ್ಮ ಮಕ್ಕಳು ಅರಿಯುತ್ತಾರೆ. ಈ ಮೌಲ್ಯವನ್ನು ನಮ್ಮ ಸಂಸ್ಥೆಯೂ, ಬೋಧಕರೂ ಎತ್ತಿಹಿಡಿಯುತ್ತ ಬಂದಿದ್ದಾರೆ.
ನಗರದ ಹೃದಯಭಾಗದಲ್ಲಿರುವ ನಮ್ಮ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣ ನೀಡುತ್ತಿದೆ. ಈಗ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ರಾಜ್ಯ ಒಕ್ಕಲಿಗರ ಸಂಘ ಶೈಕ್ಷಣಿಕ ರಂಗದಲ್ಲಿ ರಾಜ್ಯದಲ್ಲೇ ದೊಡ್ಡ ಹೆಸರು ಮಾಡಿದೆ. ಅದು ಸ್ಥಾಪಿಸಿದ ಮೊದಲ ಕಾಲೇಜು ನಮ್ಮದು ಅದರ ಎಲ್ಲ ಸಂಸ್ಥೆಗಳ ಮಾತೃ ಸಂಸ್ಥೆ. ಇಲ್ಲಿ ಕಲಿತ ಅನೇಕರು ಐ.ಎ.ಎಸ್. ಐ.ಪಿ.ಎಸ್. ಕೆ.ಎ.ಎಸ್, ವಕೀಲ ವೃತ್ತಿ ನ್ಯಾಯಾಧೀಶ ಹುದ್ದೆ ಸಚಿವ ಹುದ್ದೆಗಳಲ್ಲಿ ದೊಡ್ಡ ಹೆಸರು ಮಾಡಿರುತ್ತಾರೆ.

ಸಂಕ್ಷಿಪ್ತ ಪರಿಚಯ

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು, ಬೆಂಗಳೂರು ನಗರದ ಹೃದಯ ಭಾಗದ ವಿಶ್ವೇಶ್ವರಪುರಂ ಬಡಾವಣೆಯಲ್ಲಿದ್ದು, ಇಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ಬಿ.ಎ ಮತ್ತು ಬಿ.ಕಾಂ ಪದವಿ ಶಿಕ್ಷಣ ವನ್ನು ಬೋಧಿಸಲಾಗುತ್ತದೆ. ಈ ಕಾಲೇಜು ಮೊದಲಿನ "ಬೆಂಗಳೂರು ವಿಶ್ವವಿದ್ಯಾನಿಲಯ" ಮತ್ತು ಹಾಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಮಾನ್ಯತೆಗೆ ಒಳಪಟ್ಟಿರುವಂತಹ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ.

ಕರ್ನಾಟಕ ಹಾಗೂ ಭಾರತದ ಅಭಿವೃದ್ದಿಯಲ್ಲಿ ಮಹತ್ವ ಪಾತ್ರವನ್ನು ಹೊಂದಿರುವ ಒಕ್ಕಲಿಗರ ಜನಾಂಗದಿಂದ 1906 ರಲ್ಲಿ ಸ್ಥಾಪಿತವಾದ ಒಕ್ಕಲಿಗರ ಸಂಘವು, ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಸ್ಥಾಪನೆಯನ್ನು ಮಾಡಿದ ನಂತರ, ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ಕಾನೂನು ಶುಶ್ರೂಷೆ, ವೃತ್ತಿ ಪರ ಶಿಕ್ಷಣ, ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದೆ.

ಆಡಳಿತ ಮಂಡಳಿ ಮತ್ತು ಸೌಲಭ್ಯಗಳು

     ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಯಲ್ಲಿ ಮಹತ್ವ ಪಾತ್ರವನ್ನು ಹೊಂದಿರುವ ರಾಜ್ಯ ಒಕ್ಕಲಿಗರ ಸಂಘ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ವಿಜ್ಞಾನ ಶಿಕ್ಷಣ ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದೆ . ಈ ಸಂಘದ ಅಡಳಿತದಲ್ಲಿ ನಮ್ಮ ಕಾಲೇಜು ನಡೆಯುತ್ತಿದೆ.

     ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಸಂಜೆ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಯದಿಂದ ಮಾನ್ಯತೆ ಪಡೆದ ಬಿ.ಎ. ಮತ್ತು ಬಿ.ಕಾಂ. ಪದವಿ ತರಗತಿಗಳಿಗೆ ಶಿಕ್ಷಣ ಲಭ್ಯವಿದೆ. ಆರು ಸೆಮಿಸ್ಟರ್‍ಗಳ ಮೂರು ವರ್ಷದ ಸಿ.ಬಿ.ಸಿ.ಎಸ್. ವಿಧಾನದ ಬಿ.ಎ ಮತ್ತು ಬಿ.ಕಾಂ. ಕೋರ್ಸುಗಳು ಲಭ್ಯವಿರುತ್ತವೆ. ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್, ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ.

     ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜು ಸಿಟಿ ಮಾರ್ಕೆಟ್‍ನ ಪಕ್ಕದಲ್ಲೇ ಇದ್ದು ಕಾಲೇಜು ಸಿ.ಟಿ. ಬಸ್‍ಗಳು ಮೆಟ್ರೋ ಟ್ರೈನ್ ಸ್ಟೇಷನ್ ಕಾಲೇಜಿನ ಎದುರಲ್ಲೇ ಇದೆ.
       ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಸಂಜೆ ಕಾಲೇಜಿನ ಇನ್ನೊಂದು ವಿಶೇಷತೆ ಏನೆಂದರೆ ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ಮಕ್ಕಳಿಗಾಗಿ ಕಾಲೇಜಿನ ಶುಲ್ಕವನ್ನು ಬೇರೆ ಖಾಸಗಿ ಕಾಲೇಜುಗಳಿಗಿಂತ ಅತಿ ಕಡಿಮೆ ಮಟ್ಟದ ಶುಲ್ಕ ಇರಿಸಲಾಗಿದೆ. ಇದರಿಂದ ಆರ್ಥಿಕವಾಗಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಭಾರವಗದಂತೆ ಆಡಳಿತ ಮಂಡಳಿ ಎಚ್ಚರ ವಹಿಸಿದೆ.

     ರಾಜ್ಯಶಾಸ್ತ್ರದ ಅಸೋಸಿಯೇಟ್ ಪ್ರೊಪೆಸರ್ ಆದ ಡಾ.ಅರೇತಿಮ್ಮೇಗೌಡರವರು ಪ್ರಾಂಶುಪಾಲರಾಗಿದ್ದು, ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ವಿಶೇಷ ಆಸಕ್ತಿಯನ್ನು ಹೊಂದಿರುವರಾಗಿದ್ದಾರೆ. ಅವರು ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ ಮಾರ್ಗದರ್ಶಕರಾಗಿರುತ್ತಾರೆ. ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುತ್ತಾರೆ. ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಸಂಜೆ ಕಾಲೇಜಿನ ಉಪನ್ಯಾಸಕರುಗಳು ಎಲ್ಲರೂ ಪೂರ್ಣಕಾಲಿಕ ಉಪನ್ಯಾಸಕರುಗಳಾಗಿದ್ದು ಎರಡು ಮೂರು ದಶಕದಷ್ಟು ಅನುಭವ ಉಳ್ಳವರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಉಪನ್ಯಾಸಕರು ಪಿ.ಹೆಚ್.ಡಿ ಪದವಿಯನ್ನು ಹೊಂದಿದವರಾಗಿ ಅತ್ಯತ್ತಮ ಶಿಕ್ಷಣ ಒದಗಿಸುವುದರಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರವೇಶಾತಿಯೂ ಹೆಚ್ಚಿದ್ದು ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸೇವೆಯನ್ನು ಸಲ್ಲಿಸಿ ಸಮುದಾಯದ ವತಿಯಿಂದ ವಿದ್ಯಾರ್ಥಿ ವೇತನದ ಸಹಾಯ ಲಭ್ಯವಿದೆ.

We are always ahead Professional Education for Your Future.

6000

HAPPY CUSTOMERS

165

APPROVED COURSES

30

CERTIFIED TEACHERS

500

AWARDS WON